Courses

shape
shape
shape
shape

ಕನ್ನಡ ವಿಭಾಗ

“ಕನ್ನಡವೆೆಂದರೆ ಬರಿ ನುಡಿಯಲ್ಲ; ಹಿರಿದಿದೆ ಅದರರ್ಥ”

ಎಂಬ ಕವಿವಾಣಿಯಂತೆ, ಕನ್ನಡ ವಿಭಾಗವು ಕನ್ನಡ ಭಾಷಾ ಬೆಳವಣಿಗೆ ಪ್ರಕ್ರಿಯೆಯಲ್ಲಿದ ವಿಳಾಸಾರ್ಥಿಗಳಿಗೆ ಓದು, ಬರವಣಿಗೆ ಕೌಶಲ್ಯ ಹೆಚ್ಚಿಸುವ ಹಾಗೂ ಭಾಷಾ ಅಧ್ಯಯನದ ಕಡೆ ಆಸಕ್ತಿ ಮೂಡಿಸುವಲ್ಲಿ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಕನ್ನಡ ವಿಭಾಗವು, ಕನ್ನಡ ಭಾಷೆ ಬೆಳೆವುದರ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳಿಗೆ ನವೀನ ಮತ್ತು ಸೃಜನಾತ್ಮಕವಾದ ರೀತಿಯಲ್ಲಿ ಬೆಳೆವುದನ್ನು ನೋಡಲು ಪ್ರೇರಣೆ ನೀಡುತ್ತಿದೆ.

ಕನ್ನಡ ಪಾಠ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆಯಲು ತರಗತಿಯಲ್ಲಿ ಸಾಮೂಹಿಕ ಚರ್ಚೆ, ಪ್ರಶ್ನೋತ್ತರ ಕಾರ್ಯಕ್ರಮ, ಪಾಠ ವಿಷಯಗಳನ್ನಾಗಿ PPT ಮೂಲಕ ತೋರಿಸುವುದು, ಹೀಗೆ ಆಧುನಿಕ ಶೈಲಿಯಲ್ಲಿ ಬೋಧನೆ ನಡೆಸಲಾಗುತ್ತದೆ.

ಇದರ ಪರಿಣಾಮವಾಗಿ ಪ್ರತಿ ವರ್ಷವೂ 98% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹೆಚ್ಚು ಅಂಕಗಳನ್ನು ಕೆಲವರು ಗಳಿಸುತ್ತಿರುವುದಲ್ಲದೆ, ದುರ್ಬಲ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಆಯೋಜಿಸಿ, ಅವರಿಗೂ ಉತ್ತೀರ್ಣರಾಗಲು ಸಾಧ್ಯವಾಗುವಂತೆ ಮಾರ್ಗದರ್ಶನ ಹಾಗೂ ಬರವಣಿಗೆಯ ಅಭ್ಯಾಸ ಮಾಡಿಸಲಾಗುತ್ತಿದೆ.

ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಆಸಕ್ತಿ ಉಂಟುಮಾಡಲು ಪ್ರತಿವರ್ಷ ಹಲವಾರು ಸ್ಪರ್ಧೆಗಳು, ವಿಶೇಷ ಉಪನ್ಯಾಸಗಳು, ಪಾಠಕ್ಕೆ ಸಂಬಂಧಿಸಿದ ಮಾದರಿಗಳನ್ನು ತಯಾರಿಸಲಾಗುತ್ತಿದೆ. ಈ ರೀತಿಯ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ, ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತದೆ.

ಕನ್ನಡ ವಿಭಾಗವು ಭಾಷಾ ಬೋಧನೆಗೆ ಮಾತ್ರ ಸೀಮಿತವಾಗದೆ, ಸಾಹಿತ್ಯ ಅಭಿರುಚಿ, ಜ್ಞಾನ ಬೆಳೆಸುವುದು, ಸೃಜನಶೀಲ ಪ್ರತಿಭೆಗಳಿಗೆ ನೆರವನ್ನು ನೀಡುವುದು, ಮತ್ತು ಕ್ರಿಯಾಶೀಲ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಮಾಡುತ್ತಿದೆ.

ವಿದ್ಯಾರ್ಥಿಗಳು ಕನ್ನಡ ಪಾಠ ವಿಷಯದ ಜ್ಞಾನವನ್ನು ಮಾತ್ರವಲ್ಲದೆ ಸವಿಯುತ್ತಾ ಸಾಮರ್ಥ್ಯದ ಅಭಿವೃದ್ದಿಯನ್ನು ಹೆಚ್ಚಿಸಲು, ಕನ್ನಡ ವಿಭಾಗವು ನಿರಂತರವಾಗಿ ಪ್ರಯತ್ನಿಸುತ್ತಿದೆ.

Apply Now